Shri Siddharoodha Swamiji Math Trust Committee

Hubballi

www.srisiddharoodhaswamiji.in

ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ: 26.01.2026 ರಂದು 77ನೇ ಗಣರಾಜ್ಯೋತ್ಸವ
Date : 26-01-2026
ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ: 26.01.2026 ರಂದು 77ನೇ ಗಣರಾಜ್ಯೋತ್ಸವ ದಿನದ ಧ್ವಜಾರೋಹಣವನ್ನು ಟ್ರಸ್ಟ್ ಕಮೀಟಿಯವತಿಯಿಂದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ಬೆಳಿಗ್ಗೆ ೮-೩೦ ಘಂಟೆಗೆ ಪೂಜೆಯೊಂದಿಗೆ ನೆರವೇರಿಸಿ ಧ್ವಜಾರೋಹಣವನ್ನು ನೆರವೇರಿಸಿದರು, ಪೂಜ್ಯ ಶ್ರೀ ಭೀಮಾನಂದ ಸ್ವಾಮಿಗಳು, ಶ್ರೀ ಸಿದ್ಧಾರೂಢ ಮಠ, ಹುಬ್ಬಳ್ಳಿ ಇವರು ಸಾನಿಧ್ಯವನ್ನು ವಹಿಸಿದ್ದರು. ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಭಕ್ತರ ಮೇಲ್ಮನೆ ಸಭಾದ ಉಪಾಧ್ಯಕ್ಷರಾದ ಶ್ರೀ ಬಿ.ಆರ್.ಬಾಗೇವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ, ಶ್ರೀ ಗೀತಾ ಟಿ. ಕಲಬುರ್ಗಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ತುಪ್ಪದ, ಶ್ರೀಮಠದ ಸಾಧುಗಳು, ಸಿಬ್ಬಂದಿವರ್ಗದವರು, ಪಾಠಶಾಲಾ ವಿದ್ಯಾರ್ಥಿಗಳು, ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು